ಇಬ್ನ್ ಇಶಾಕ್ 
	-768. ಅರೇಬಿಯದ ಇತಿಹಾಸಕಾರ ಪೂರ್ಣ ಹೆಸರು ಮಹಮದ್ ಇಬನ್ ಇಶಾಕ್. ಈತನ ಕಿತಾಬ್ ಸೀರತ್‍ರಸೂಲ್ಲಲ ಎಂಬ ಪುಸ್ತಕ ಮಹಮ್ಮದ್ ಪೈಗಂಬರರ ಚರಿತ್ರೆಯನ್ನು ತಿಳಿಯಲು ಮುಖ್ಯವಾದ ಅಧಾರಗ್ರಂಥವಾಗಿದೆ. ಮದೀನದಲ್ಲಿ ಹೆಚ್ಚು ಕಾಲವಿದ್ದದ್ದರಿಂದ ಮಹಮ್ಮದನ ಜೀವನ. ತತ್ತ್ವಪ್ರಚಾರಗಳ ಬಗ್ಗೆ ಅಧಿಕವಾದ ಅಸಕ್ತಿ ಹುಟ್ಟಿತು. ಈತನ ಧರ್ಮಾದ್ದರಿಂದ. 733ರಲ್ಲಿ ಮದೀನವನ್ನು ಬಿಟ್ಟು ಹೊರಟು, ಸ್ವಲ್ಪಕಾಲ ಅಲೆಕ್ಸಾಂಡ್ರಿಯದಲ್ಲೂ ಇನ್ನಷ್ಟು ಕಾಲ ಕೂಫ ಮತ್ತು ಹೀರಾದಲ್ಲೂ ಇದ್ದು ಅಂತ್ಯದಲ್ಲಿ ಬಾಗಾದಾದನ್ನು ಸೇರಿ ಅಲ್ಲಿಯೇ ತನ್ನ ಇತಿಹಾಸ ಗ್ರಂಥವನ್ನು ಬರೆದ. ಈಗ ಮೂಲಗ್ರಂಥ ಉಪಲಬ್ಧವಿಲ್ಲ. ಅರಬ್ಬೀ ಬರೆಹಗಾರರು ಈ ಗ್ರಂಥವನ್ನು ನಂಬಿಕೆಗೆ ಅನರ್ಹವಾದುದೆಂದು ಟೀಕಿಸಿದರೂ ಇದೊಂದು ಉತ್ತಮವಾದ ಚರಿತ್ರೆಯಾಗಿಯೇ ಉಳಿದಿದೆಯೆಂದು ಹಲವರ ಅಭಿಪ್ರಾಯ.											
(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ